ಮೀಮ್ ಮೆಗಾ ಪ್ರೆಸೆಂಟ್ಸ್

ವಿವಿಧ ಸ್ಪರ್ಧೆಗಳಿಗೆ ಮತ್ತಷ್ಟು ಸೊಬಗಿನೊಂದಿಗೆ ಮೀಮ್ ವೇದಿಕೆಯಾಗುತ್ತಿದೆ.

ಪೋಸ್ಟರ್ ಪ್ರಸೆಂಟೇಶನ್

ಪೋಸ್ಟರ್ ಪ್ರಸೆಂಟೇಶನ್

ಪ್ರವಾದಿ ﷺ ಅವರನ್ನು ಆಧರಿಸಿದ ಸಾಹಿತ್ಯ ಕೃತಿಗಳು ಜಾಗತಿಕ ಸಾಹಿತ್ಯದಲ್ಲಿ ಅಮರವಾದ ಸ್ಥಾನವನ್ನು ಪಡೆದಿವೆ. ಜಾಗತಿಕ ಮಟ್ಟದಲ್ಲಿ ಬೆಳೆದ ಈ ಸಾಹಿತ್ಯ ಲೋಕದಲ್ಲಿ ಭಾರತೀಯ ಭಾಷೆಗಳ ಉಪಸ್ಥಿತಿಯು ಅತ್ಯಂತ ಗಮನಾರ್ಹವಾಗಿದೆ. ಈ ನಿಟ್ಟಿನಲ್ಲಿ ಮಲಯಾಳಂ, ತಮಿಳು, ಅರಬಿ-ಮಲಯಾಳಂ, ಕನ್ನಡ, ಉರ್ದು ಮುಂತಾದ ಭಾಷೆಗಳಲ್ಲಿ ರಚಿತವಾದ ಅಸಂಖ್ಯಾತ ಕೃತಿಗಳ ವೈವಿಧ್ಯತೆಯನ್ನು ಇದು ಪರಿಚಯಿಸುತ್ತದೆ.

ಆನ್‌ಲೈನ್ ಮೆಗಾ ಕ್ವಿಜ್

ಆನ್‌ಲೈನ್ ಮೆಗಾ ಕ್ವಿಜ್

ಇದು ಪ್ರವಾದಿ ಚರಿತ್ರೆಯ ವಿವಿಧ ಸಂದರ್ಭಗಳನ್ನು ಆಧರಿಸಿ ಆಯೋಜಿಸಲಾಗುವ ಬೃಹತ್ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆಯಾಗಿದೆ. ವಿವಿಧ ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಮಾತ್ರ ಆಯೋಜಿಸಲಾಗಿದೆ. ಈ ಸ್ಪರ್ಧೆಯು ಮಲಯಾಳಂ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ನಡೆಯುತ್ತದೆ.

ಬುಕ್ ಟೆಸ್ಟ್

ಬುಕ್ ಟೆಸ್ಟ್

ಮುಹಮ್ಮದ್ ಸಜೀರ್ ಬುಖಾರಿ ಬರೆದ 'ತಿರುನಬಿಯುಡೆ ಕುಟುಂಬ ಜೀವಿತಂ' (ಪ್ರವಾದಿ ﷺ ಅವರ ಕೌಟುಂಬಿಕ ಜೀವನ) ಪುಸ್ತಕವನ್ನು ಆಧರಿಸಿದ ಬುಕ್ ಟೆಸ್ಟ್. ಎರಡು ಹಂತಗಳಲ್ಲಿ ನಡೆಯುವ ಈ ಸ್ಪರ್ಧೆಯ ಮೊದಲ ಹಂತದ ನೋಂದಣಿ ಸಂಪೂರ್ಣ ಉಚಿತವಾಗಿದೆ.